iPhoneನಲ್ಲಿನ ನೋಟಿಫಿಕೇಷನ್ಗಳನ್ನು ನೋಡಿ ಮತ್ತು ಪ್ರತಿಕ್ರಿಯಿಸಿ
ಹೊಸತೇನಿದೆ ಎಂಬ ಬಗ್ಗೆ ಗಮನಿಸಲು ನೋಟಿಫಿಕೇಷನ್ಗಳು ನಿಮಗೆ ಸಹಾಯ ಮಾಡುತ್ತವೆ. ಉದಾಹರಣೆಗೆ ನೀವು ಕರೆಯನ್ನು ಮಿಸ್ ಮಾಡಿಕೊಂಡರೆ, ಇವೆಂಟ್ನ ದಿನಾಂಕವು ಬದಲಾಗಿದ್ದರೆ ಮತ್ತು ಇನ್ನೂ ಹೆಚ್ಚಿನದನ್ನು ಅವು ನಿಮಗೆ ತಿಳಿಸುತ್ತವೆ. ನಿಮಗೆ ಮುಖ್ಯವಾದುದು ಮಾತ್ರ ಕಾಣುವಂತೆ ನಿಮ್ಮ ನೋಟಿಫಿಕೇಷನ್ ಸೆಟ್ಟಿಂಗ್ಸ್ ಅನ್ನು ನೀವು ಕಸ್ಟಮೈಸ್ ಮಾಡಬಹುದು.
ಒಂದು ಫೋಕಸ್ ಮೂಲಕ ನೀವು ನೋಟಿಫಿಕೇಷನ್ಗಳನ್ನು ನಿಶ್ಯಬ್ದಗೊಳಿಸಿರದ ಹೊರತು, ಅವುಗಳು ಬಂದಂತೆ iPhone ಅವುಗಳನ್ನು ಪ್ರದರ್ಶಿಸುತ್ತದೆ. ಅಡಚಣೆಯನ್ನು ಕಡಿಮೆ ಮಾಡಲು ಅವು ಸ್ಕ್ರೀನ್ನ ಕೆಳಭಾಗದಿಂದ ಕಾಣಿಸಿಕೊಳ್ಳುತ್ತವೆ. ನೀವು ಅವುಗಳನ್ನು ಲಾಕ್ ಸ್ಕ್ರೀನ್ನಲ್ಲಿ ವಿಸ್ತರಿಸಿದ ಪಟ್ಟಿಯ ವ್ಯೂ, ಸ್ಟ್ಯಾಕ್ ಮಾಡಿದ ವ್ಯೂ ಅಥವಾ ಎಣಿಕೆಯ ವ್ಯೂ ರೂಪದಲ್ಲಿ ವೀಕ್ಷಿಸಬಹುದು. ಲೇಔಟ್ ಅನ್ನು ಬದಲಾಯಿಸಲು ಲಾಕ್ ಸ್ಕ್ರೀನ್ ಮೇಲಿನ ನೋಟಿಫಿಕೇಷನ್ಗಳನ್ನು ಪಿಂಚ್ ಮಾಡಿ.
ಗಮನಿಸಿ: ನೀವು ಒಂದು ಆ್ಯಪ್ ಅನ್ನು ಬಳಸುತ್ತಿರುವಾಗ, ನೀವು ಅದರಿಂದ ನೋಟಿಫಿಕೇಷನ್ಗಳನ್ನು ಹೇಗೆ ಸ್ವೀಕರಿಸಲು ಬಯಸುತ್ತೀರಿ ಎಂದು ನಿಮಗೆ ಕೇಳಬಹುದು—ಕೂಡಲೇ, ಎಂದಿಗೂ ಬೇಡ ಅಥವಾ ನಿಗದಿಗೊಳಿಸಿದ ಸಾರಾಂಶದಲ್ಲಿ. ಸೆಟ್ಟಿಂಗ್ಸ್ ಆ್ಯಪ್ > ನೋಟಿಫಿಕೇಷನ್ಗಳು ಎಂಬುದರಲ್ಲಿ ನೀವು ನಂತರದ ಸಮಯದಲ್ಲಿ ಈ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು.
ನೋಟಿಫಿಕೇಷನ್ ಸೆಂಟರ್ನಲ್ಲಿ ನಿಮ್ಮ ನೋಟಿಫಿಕೇಷನ್ಗಳನ್ನು ಕಂಡುಕೊಳ್ಳುವುದು
ನೋಟಿಫಿಕೇಷನ್ ಸೆಂಟರ್ನಲ್ಲಿ ನಿಮ್ಮ ನೋಟಿಫಿಕೇಷನ್ಗಳನ್ನು ನೋಡಲು, ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ಲಾಕ್ ಸ್ಕ್ರೀನ್ನಲ್ಲಿ: ಸ್ಕ್ರೀನ್ನ ಮಧ್ಯದಿಂದ ಮೇಲಕ್ಕೆ ಸ್ವೈಪ್ ಮಾಡಿ.
ಇತರ ಸ್ಕ್ರೀನ್ಗಳಲ್ಲಿ: ಮೇಲಿನ ಮಧ್ಯದಿಂದ ಕೆಳಕ್ಕೆ ಸ್ವೈಪ್ ಮಾಡಿ. ಯಾವುದಾದರೂ ಹಳೆಯ ನೋಟಿಫಿಕೇಷನ್ಗಳಿದ್ದರೆ, ಅವುಗಳನ್ನು ನೋಡಲು ನೀವು ಮೇಲಕ್ಕೆ ಸ್ಕ್ರೋಲ್ ಮಾಡಬಹುದು.
ನೋಟಿಫಿಕೇಷನ್ ಸೆಂಟರ್ ಅನ್ನು ಮುಚ್ಚಲು, ಒಂದು ಬೆರಳಿನಿಂದ ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿ ಅಥವಾ ಹೋಮ್ ಬಟನ್ ಅನ್ನು ಒತ್ತಿ (ಹೋಮ್ ಬಟನ್ ಇರುವ iPhoneನಲ್ಲಿ).
ನೋಟಿಫಿಕೇಷನ್ಗಳಿಗೆ ಪ್ರತಿಕ್ರಿಯಿಸಿ
ನೀವು ನೋಟಿಫಿಕೇಷನ್ ಸೆಂಟರ್ನಲ್ಲಿ ಅಥವಾ ಲಾಕ್ ಸ್ಕ್ರೀನ್ನಲ್ಲಿ ಒಂದಕ್ಕಿಂತ ಹೆಚ್ಚು ನೋಟಿಫಿಕೇಷನ್ಗಳನ್ನು ಹೊಂದಿರುವಾಗ, ಅವುಗಳನ್ನು ಆ್ಯಪ್ನ ಪ್ರಕಾರ ಗುಂಪು ಮಾಡಲಾಗುತ್ತದೆ, ಇದು ಅವುಗಳನ್ನು ವೀಕ್ಷಿಸಲು ಮತ್ತು ನಿರ್ವಹಿಸಲು ಸುಲಭವಾಗಿಸುತ್ತದೆ. ಆ್ಯಪ್ನೊಳಗಿನ ವಿಷಯ ಅಥವಾ ಥ್ರೆಡ್ನಂತಹ ವ್ಯವಸ್ಥಿತಗೊಳಿಸುವ ಫೀಚರ್ಗಳನ್ನು ಬಳಸಿಯೂ ಕೆಲವು ಆ್ಯಪ್ಗಳಿಂದ ಬರುವ ನೋಟಿಫಿಕೇಷನ್ಗಳನ್ನು ಗುಂಪು ಮಾಡಿರಬಹುದು. ಗುಂಪು ಮಾಡಲಾದ ನೋಟಿಫಿಕೇಷನ್ಗಳು ಸ್ಟ್ಯಾಕ್ಗಳಾಗಿ ಕಾಣಿಸಿಕೊಳ್ಳುತ್ತವೆ ಮತ್ತು ಎಲ್ಲಕ್ಕಿಂತ ಮೇಲೆ ತೀರಾ ಇತ್ತೀಚಿನ ನೋಟಿಫಿಕೇಷನ್ ಇರುತ್ತದೆ.
ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ನೋಟಿಫಿಕೇಷನ್ಗಳನ್ನು ಒಂದೊಂದಾಗಿ ನೋಡುವುದಕ್ಕಾಗಿ ನೋಟಿಫಿಕೇಷನ್ ಗುಂಪನ್ನು ವಿಸ್ತರಿಸಲು: ಗುಂಪನ್ನು ಟ್ಯಾಪ್ ಮಾಡಿ. ಗುಂಪನ್ನು ಮುಚ್ಚಲು, ಕಡಿಮೆ ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ.
ನೋಟಿಫಿಕೇಷನ್ ಅನ್ನು ಆ್ಯಪ್ ಒದಗಿಸುತ್ತದೆ ಎಂದಾದರೆ ಅದನ್ನು ನೋಡಲು ಮತ್ತು ತ್ವರಿತ ಕ್ರಿಯೆಗಳನ್ನು ನಿರ್ವಹಿಸಲು (ಬೆಂಬಲಿತ ಮಾಡಲ್ಗಳಲ್ಲಿ): ನೋಟಿಫಿಕೇಷನ್ ಅನ್ನು ಒತ್ತಿ ಹಿಡಿದುಕೊಳ್ಳಿ.
ನೋಟಿಫಿಕೇಷನ್ಗೆ ಸಂಬಂಧಿಸಿದ ಆ್ಯಪ್ ತೆರೆಯಲು: ನೋಟಿಫಿಕೇಷನ್ ಟ್ಯಾಪ್ ಮಾಡಿ.
ನೋಟಿಫಿಕೇಷನ್ ಸಾರಾಂಶವನ್ನು ನಿಗದಿಪಡಿಸಿ
ನಿಮ್ಮ ನೋಟಿಫಿಕೇಷನ್ಗಳನ್ನು ಸಾರಾಂಶದ ರೂಪದಲ್ಲಿ ತಲುಪುವಂತೆ ನಿಗದಿಪಡಿಸುವ ಮೂಲಕ ನಿಮ್ಮ ದಿನದಲ್ಲಿ ನೀವು ಅಡಚಣೆಗಳನ್ನು ಕಡಿಮೆ ಮಾಡಬಹುದು. ಯಾವ ನೋಟಿಫಿಕೇಷನ್ಗಳನ್ನು ಸಾರಾಂಶದಲ್ಲಿ ಸೇರಿಸಬೇಕು ಮತ್ತು ನೀವು ಅದನ್ನು ಯಾವ ಸಮಯದಲ್ಲಿ ಸ್ವೀಕರಿಸಲು ಬಯಸುತ್ತೀರಿ ಎಂಬುದನ್ನು ನೀವು ಆಯ್ಕೆಮಾಡಬಹುದು.
ನೋಟಿಫಿಕೇಷನ್ ಸಾರಾಂಶವನ್ನು ನಿಮಗಾಗಿ ವೈಯಕ್ತೀಕರಿಸಲಾಗಿರುತ್ತದೆ ಮತ್ತು ನಿಮ್ಮ ಪ್ರಸ್ತುತ ಚಟುವಟಿಕೆಯ ಆಧಾರದ ಮೇಲೆ ಆದ್ಯತೆಯ ಮೇಲೆ ಅದನ್ನು ಬುದ್ಧಿವಂತಿಕೆಯಿಂದ ಕ್ರಮಬದ್ಧಗೊಳಿಸಲಾಗಿದ್ದು ಮೇಲ್ಭಾಗದಲ್ಲಿ ಅತ್ಯಂತ ಸೂಕ್ತವಾದ ನೋಟಿಫಿಕೇಷನ್ಗಳಿವೆ. ಸಾರಾಂಶವು ಅತ್ಯಂತ ಉಪಯುಕ್ತವಾಗಿರುತ್ತದೆ. ಏಕೆಂದರೆ ಇದು ನಿಮ್ಮ ಅನುಕೂಲಕರ ಸಮಯದಲ್ಲಿ ನೋಟಿಫಿಕೇಷನ್ಗಳೊಂದಿಗೆ ತೊಡಗಿಸಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. ನೀವು ಒಂದು ಚಟುವಟಿಕೆ ಮೇಲೆ ಗಮನಹರಿಸಿದಾಗ ನೋಟಿಫಿಕೇಷನ್ಗಳನ್ನು ಫಿಲ್ಟರ್ ಮಾಡಲು ನೀವು ಫೋಕಸ್ ಬಳಸಿಕೊಂಡು ಇದನ್ನು ಇನ್ನಷ್ಟು ಉತ್ತಮಗೊಳಿಸಬಹುದು.
ಸೆಟ್ಟಿಂಗ್ಸ್ ಆ್ಯಪ್
> ನೋಟಿಫಿಕೇಷನ್ಗಳು > ನಿಗದಿಪಡಿಸಿದ ಸಾರಾಂಶ ಎಂಬಲ್ಲಿಗೆ ಹೋಗಿ, ನಂತರ ನಿಗದಿಪಡಿಸಿದ ಸಾರಾಂಶ ಎಂಬುದನ್ನು ಆನ್ ಮಾಡಿ.ನಿಮ್ಮ ಸಾರಾಂಶವು ಕಾಣಿಸಿಕೊಳ್ಳಲು ಸಮಯವನ್ನು ಸೆಟ್ ಮಾಡಿ. ನೀವು ಮತ್ತೊಂದು ಸಾರಾಂಶವನ್ನು ಸ್ವೀಕರಿಸಲು ಬಯಸಿದರೆ, ಸಾರಾಂಶವನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
ನಿಮ್ಮ ಸಾರಾಂಶದಲ್ಲಿ ಸೇರಿಸಲು ಆ್ಯಪ್ಗಳನ್ನು ಆಯ್ಕೆಮಾಡಿ.
ಸಾರಾಂಶದಲ್ಲಿರುವ ಆ್ಯಪ್ಗಳ ಕೆಳಗೆ ಅ - ಳ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಸಾರಾಂಶದಲ್ಲಿ ನೀವು ಸೇರಿಸಲು ಬಯಸುವ ಆ್ಯಪ್ಗಳು ಆನ್ ಆಗಿವೆ ಎಂದು ಖಚಿತಪಡಿಸಿಕೊಳ್ಳಿ.
ಗಮನಿಸಿ: ನಿಮ್ಮ ನೋಟಿಫಿಕೇಷನ್ ಸಾರಾಂಶದಲ್ಲಿ ನೀವು ಸೇರಿಸಲು ಬಯಸುವ ಆ್ಯಪ್ ಅ - ಳ ಪಟ್ಟಿಯಲ್ಲಿ ಕಾಣಿಸದಿದ್ದರೆ, ನೀವು ಆ ಆ್ಯಪ್ಗಾಗಿ “ನೋಟಿಫಿಕೇಷನ್ಗಳನ್ನು ಅನುಮತಿಸಿ” ಎಂಬುದನ್ನು ಆನ್ ಮಾಡಬೇಕಾಗಬಹುದು. ಸೆಟ್ಟಿಂಗ್ಸ್ ಆ್ಯಪ್ > ನೋಟಿಫಿಕೇಷನ್ಗಳು ಎಂಬಲ್ಲಿಗೆ ಹೋಗಿ, ನಂತರ ನೋಟಿಫಿಕೇಷನ್ಗಳನ್ನು ಅನುಮತಿಸಿ ಎಂಬುದನ್ನು ಆನ್ ಮಾಡಿ. ನೋಟಿಫಿಕೇಷನ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ ಎಂಬುದನ್ನು ನೋಡಿ.
ನೋಟಿಫಿಕೇಷನ್ಗಳನ್ನು ನೋಡುವುದು, ವಜಾಗೊಳಿಸುವುದು, ತೆರವುಗೊಳಿಸುವುದು ಮತ್ತು ಮ್ಯೂಟ್ ಮಾಡುವುದು
ನಿಮ್ಮ iPhoneನಲ್ಲಿ ನೋಟಿಫಿಕೇಷನ್ಗಳು ಕಾಣಿಸಿಕೊಂಡಾಗ, ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ಮತ್ತೊಂದು ಆ್ಯಪ್ ಬಳಸುವಾಗ ನೀವು ಸ್ವೀಕರಿಸುವ ನೋಟಿಫಿಕೇಷನ್ ಅನ್ನು ನಿರ್ವಹಿಸಿ: ಇದನ್ನು ವೀಕ್ಷಿಸಲು ಟ್ಯಾಪ್ ಮಾಡಿ, ನಂತರ ಅದನ್ನು ವಜಾಗೊಳಿಸಲು ಮೇಲಕ್ಕೆ ಸ್ವೈಪ್ ಮಾಡಿ.
ನೋಟಿಫಿಕೇಷನ್ಗಳನ್ನು ತೆರವುಗೊಳಿಸಿ: ನೋಟಿಫಿಕೇಷನ್ ಅಥವಾ ನೋಟಿಫಿಕೇಷನ್ಗಳ ಗುಂಪಿನ ಮೇಲೆ ಎಡಕ್ಕೆ ಸ್ವೈಪ್ ಮಾಡಿ, ನಂತರ ತೆರವುಗೊಳಿಸಿ ಅಥವಾ ಎಲ್ಲವನ್ನೂ ತೆರವುಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ.
ಆ್ಯಪ್ಗಾಗಿ ನೋಟಿಫಿಕೇಷನ್ಗಳನ್ನು ಮ್ಯೂಟ್ ಮಾಡಿ: ನೋಟಿಫಿಕೇಷನ್ ಅಥವಾ ನೋಟಿಫಿಕೇಷನ್ಗಳ ಗುಂಪಿನ ಮೇಲೆ ಎಡಕ್ಕೆ ಸ್ವೈಪ್ ಮಾಡಿ, ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಒಂದು ಗಂಟೆ ಅಥವಾ ಒಂದು ದಿನಕ್ಕಾಗಿ ಆ ಆ್ಯಪ್ನ ನೋಟಿಫಿಕೇಷನ್ಗಳನ್ನು ಮ್ಯೂಟ್ ಮಾಡಲು ಇರುವ ಆಯ್ಕೆಯನ್ನು ಟ್ಯಾಪ್ ಮಾಡಿ. ಇದು ಅವುಗಳನ್ನು ನೇರವಾಗಿ ನೋಟಿಫಿಕೇಷನ್ ಸೆಂಟರ್ಗೆ ಕಳುಹಿಸುತ್ತದೆ ಮತ್ತು ಅವುಗಳು ಲಾಕ್ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುವುದನ್ನು, ಸೌಂಡ್ ಪ್ಲೇ ಮಾಡುವುದನ್ನು, ಸ್ಕ್ರೀನ್ ಬೆಳಗಿಸುವುದನ್ನು ಅಥವಾ ಬ್ಯಾನರ್ ಪ್ರಸ್ತುತಪಡಿಸುವುದನ್ನು ತಡೆಯುತ್ತದೆ.
ಈ ನೋಟಿಫಿಕೇಷನ್ಗಳನ್ನು ಪುನಃ ನೋಡಲು ಮತ್ತು ಕೇಳಲು, ನೋಟಿಫಿಕೇಷನ್ ಸೆಂಟರ್ನಲ್ಲಿನ ನೋಟಿಫಿಕೇಷನ್ ಎಂಬುದರ ಮೇಲೆ ಎಡಕ್ಕೆ ಸ್ವೈಪ್ ಮಾಡಿ, ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಅನ್ಮ್ಯೂಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಆ್ಯಪ್ ಅಥವಾ ನೋಟಿಫಿಕೇಷನ್ ಗುಂಪಿಗೆ ನೋಟಿಫಿಕೇಷನ್ಗಳನ್ನು ಆಫ್ ಮಾಡಿ: ನೋಟಿಫಿಕೇಷನ್ ಅಥವಾ ನೋಟಿಫಿಕೇಷನ್ಗಳ ಗುಂಪಿನ ಮೇಲೆ ಎಡಕ್ಕೆ ಸ್ವೈಪ್ ಮಾಡಿ, ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಆಫ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಒಂದು ಆ್ಯಪ್ ನೋಟಿಫಿಕೇಷನ್ಗಳನ್ನು ಹೇಗೆ ಪ್ರದರ್ಶಿಸುತ್ತದೆ ಎಂಬುದನ್ನು ಬದಲಾಯಿಸಿ: ನೋಟಿಫಿಕೇಷನ್ ಒಂದರ ಮೇಲೆ ಎಡಕ್ಕೆ ಸ್ವೈಪ್ ಮಾಡಿ, ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಸೆಟ್ಟಿಂಗ್ಸ್ ಅನ್ನು ನೋಡಿ ಎಂಬುದನ್ನು ಟ್ಯಾಪ್ ಮಾಡಿ. ನೀವು ಬದಲಾಯಿಸಬಹುದಾದ ಸೆಟ್ಟಿಂಗ್ಸ್ ಕುರಿತು ತಿಳಿಯಲು ನೋಟಿಫಿಕೇಷನ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ ಎಂಬುದನ್ನು ನೋಡಿ.
ನೋಟಿಫಿಕೇಷನ್ ಸೆಂಟರ್ನಲ್ಲಿ ನಿಮ್ಮ ಎಲ್ಲಾ ನೋಟಿಫಿಕೇಷನ್ಗಳನ್ನು ತೆರವುಗೊಳಿಸಿ: ನೋಟಿಫಿಕೇಷನ್ ಸೆಂಟರ್ಗೆ ಹೋಗಿ,
ಅನ್ನು ಟ್ಯಾಪ್ ಮಾಡಿ, ನಂತರ ತೆರವುಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ.ಎಲ್ಲಾ ನೋಟಿಫಿಕೇಷನ್ಗಳನ್ನು ನಿಶ್ಯಬ್ದಗೊಳಿಸಿ: ಅಡಚಣೆ ಮಾಡಬೇಡಿ ಎಂಬುದನ್ನು ಆನ್ ಮಾಡಿ. ಫೋಕಸ್ ಅನ್ನು ಆನ್ ಮಾಡಿ ಅಥವಾ ನಿಗದಿಪಡಿಸಿ ಎಂಬುದನ್ನು ನೋಡಿ.
ನೀವು ಕೆಲ ಸಮಯದವರೆಗೆ ಆ್ಯಪ್ ಅನ್ನು ಬಳಸದಿರುವಾಗ, ಆ ಆ್ಯಪ್ಗಾಗಿ ನೋಟಿಫಿಕೇಷನ್ಗಳನ್ನು ಆಫ್ ಮಾಡುವಂತೆ ಸೂಚಿಸುವ ಸಲಹೆಯನ್ನು ನೀವು ನೋಡಬಹುದು.
ಲಾಕ್ ಸ್ಕ್ರೀನ್ನಲ್ಲಿ ಇತ್ತೀಚಿನ ನೋಟಿಫಿಕೇಷನ್ಗಳನ್ನು ತೋರಿಸಿ
ನೀವು ಲಾಕ್ ಸ್ಕ್ರೀನ್ನಲ್ಲಿ ನೋಟಿಫಿಕೇಷನ್ ಸೆಂಟರ್ಗೆ ಆ್ಯಕ್ಸೆಸ್ ಅನ್ನು ಅನುಮತಿಸಬಹುದು.
ಸೆಟ್ಟಿಂಗ್ಸ್ ಆ್ಯಪ್
> Face ID ಮತ್ತು ಪಾಸ್ಕೋಡ್ ಎಂಬಲ್ಲಿಗೆ ಹೋಗಿ (Face ID ಹೊಂದಿರುವ iPhoneನಲ್ಲಿ) ಅಥವಾ Touch ID ಮತ್ತು ಪಾಸ್ಕೋಡ್ (ಇತರ iPhone ಮಾಡಲ್ಗಳಲ್ಲಿ) ಎಂಬಲ್ಲಿಗೆ ಹೋಗಿ.ನಿಮ್ಮ ಪಾಸ್ಕೋಡ್ ಅನ್ನು ನಮೂದಿಸಿ.
ಕೆಳಗೆ ಸ್ಕ್ರೋಲ್ ಮಾಡಿ ಮತ್ತು ನೋಟಿಫಿಕೇಷನ್ ಸೆಂಟರ್ ಅನ್ನು ಆನ್ ಮಾಡಿ (ಲಾಕ್ ಮಾಡಿದಾಗ ಆಕ್ಸೆಸ್ ಅನ್ನು ಅನುಮತಿಸಿ ಎಂಬುದರ ಕೆಳಗೆ).
ನೋಟಿಫಿಕೇಶನ್ಗಳನ್ನು ಸಾರಾಂಶಗೊಳಿಸಲು ಮತ್ತು ಸಮಯ-ಸೂಕ್ಷ್ಮವಾದವುಗಳಿಗೆ ಆದ್ಯತೆ ನೀಡಲು Apple Intelligence ಅನ್ನು ಬಳಸುವುದು
Apple Intelligence* ಆನ್ ಆಗಿದ್ದರೆ, ನೀವು ಉದ್ದವಾದ ಅಥವಾ ಸ್ಟ್ಯಾಕ್ ಮಾಡಲಾದ ನೋಟಿಫಿಕೇಷನ್ಗಳನ್ನು ಸಾರಾಂಶಗೊಳಿಸಲು Apple Intelligence ಅನ್ನು ಬಳಸಬಹುದು, ಇದರಿಂದ ಅವುಗಳನ್ನು ಒಂದೇ ನೋಟದಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ರಸಮಯ-ಸೂಕ್ಷ್ಮ ನೋಟಿಫಿಕೇಷನ್ಗಳಿಗೆ ಆದ್ಯತೆ ನೀಡಲು ನೀವು Apple Intelligence ಅನ್ನು ಸಹ ಬಳಸಬಹುದು, ಇದರಿಂದ ನೀವು ಮಿಸ್ ಮಾಡಿಕೊಂಡಿರುವುದರ ಕುರಿತು ತಿಳಿದುಕೊಳ್ಳಬಹುದು. Apple Intelligence ಮೂಲಕ ನೋಟಿಫಿಕೇಷನ್ಗಳನ್ನು ಸಂಕ್ಷಿಪ್ತಗೊಳಿಸಿ ಮತ್ತು ಅಡಚಣೆಗಳನ್ನು ಕಡಿಮೆ ಮಾಡಿ ಎಂಬುದನ್ನು ನೋಡಿ.